NEWS

ಜನವರಿ 1 ಹೊಸ ವರ್ಷಾಚರಣೆ – ಗಣ್ಯರಿಗೆ ಸನ್ಮಾನ – ಸಾಂಸ್ಕೃತಿಕ ಕಾರ್ಯಕ್ರಮ

ಪಾಲನೆ ನ್ಯೂಸ್

ಮಂಡ್ಯ: ನಗರದ ಶ್ರೀ ರಂಜೀ ಕಲಾ ವೇದಿಕೆಯು ಜನವರಿ 1 ರಂದು ಮಂಡ್ಯ ಜನತೆಗೆ ಹೊಸ ವರ್ಷದ ಶುಭ ಕೋರಲು ಜನವರಿ 1 ರಂದು ಸಂಜೆ 5.30 ಗಂಟೆಗೆ ಇಲ್ಲಿನ ವಿದ್ಯಾ ಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ 39 ನೇ ವರ್ಷದ ಸಂಭ್ರಮಾಚಾರಣೆಯನ್ನು ಆಯೋಜಿಸಲಾಗಿದೆ.

ಅಂದು ಸಂಜೆ 5.30 ಗಂಟೆಗೆ ಶ್ರೀ ಶಂಕರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ, Nishith, ಪುನರ್ವ, ಜೈಕುಮಾರ್ ಅವರಿಂದ ಕೀ ಬೋರ್ಡ್ ವಾದನ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮ ವಾಗಿ ಪೂಜ್ಯನ್ ಸಾರಥ್ಯಅವರಿಂದ ಕೀ ಬೋರ್ಡ್ ವಾದನ ನಡೆಯಲಿದೆ.

ನಂತರ ನಾಡಿನ ಖ್ಯಾತ ಗಾಯಕ ಕಲಾಶ್ರೀ ಸಿ. ಪಿ. ವಿದ್ಯಾಶಂಕರ್ ಮತ್ತು ತಂಡದಿಂದ ಭಕ್ತಿ ಸುಧಾ ಕಾರ್ಯಕ್ರಮ ನಡೆಯಲಿದೆ.

ಅಂದು ರಾತ್ರಿ 7.30 ಗಂಟೆಗೆ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ. ಚಂದ್ರಶೇಖರ್ ಉದ್ಘಾತಟಿಸಳಿದ್ದು ಅಧ್ಯಕ್ಷತೆಯನ್ನು ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಲೈ, ಕೆ. ಟಿ. ಹನುಮಂತು ವಹಿಸುವರು. ಹೊಸ ವರ್ಷದ ಶುಭಾಶಯವನ್ನು ಕಲಾಪೋಷಕ, ಜಿಲ್ಲಾ ಕಸಾಪ ಕೋಶಾಧಿಕಾರಿ ಬಿ. ಎಂ. ಅಪ್ಪಾಜಪ್ಪ ಸಲ್ಲಿಸುವರು.

ಮುಖ್ಯ ಅತಿಥಿಗಳಾಗಿ ಕನ್ನಿಕಾ ಶಿಲ್ಪಾ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ಬಿ.ರಾಮಕೃಷ್ಣ, ಜಿಲ್ಲಾ ರಕ್ಷಣಾ ವೇದಿಕೆಯ ಮುಖ್ಯಸ್ಥ ಕೆ. ಟಿ. ಶಂಕರೇ ಗೌಡ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ನ ಕಾರ್ಯಧ್ಯಕ್ಷ ಡಾ. ಅಶ್ವಿನ್ ನಾರಾಯಣ್, ಅಖಿಲ ಕರ್ನಾಟಕ ಬಾಹ್ಮಣ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ಜಿ. ವಿ. ನಾಗರಾಜು, ಖ್ಯಾತ ವಕೀಲ ಬಸವಯ್ಯ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿ.ಎಂ.ಸೋಮಶೇಖರ್ ಅವರಿಗೆ ಹುಟ್ಟುಹಬ್ಬದ ಗೌರವವನ್ನು ಸಲ್ಲಿಸಿ ಅಭಿನಂದಿಸಲಾಗುವುದು.

ಹೊಸ ವರ್ಷದ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರುಗಳಾದ ಡಾ.ಅನುಪಮ ವಿವೇಕಾನಂದ ( ವೈದ್ಯಕೀಯ ) ಶ್ರೀ ವರಹ ವಿಠ್ಠಲ ದಾಸರು ( ಆಧ್ಯಾತ್ಮ ) ಹಾಗೂ ಬಾಲ ಪ್ರತಿಭೆ ಪೂಜ್ಯನ್ ಸಾರಥ್ಯ (ಕೀ ಬೋರ್ಡ್ ಸಂಗೀತ ) ಅವರುಗಳನ್ನು ಖ್ಯಾತ ವೈದ್ಯ ಬಿ. ಕೀ. ಸುರೇಶ್, ಡಾ. ಟಿ. ಎಸ್. ಸತ್ಯನಾರಾಯಣ ರಾವ್, ಜೈ ಕರ್ನಾಟಕ ಪರಿಷತ್ ನ ರಾಜ್ಯಾಧ್ಯಕ್ಷ ಡಾ. ಎಸ್. ನಾರಾಯಣ್ ಹಾಗೂ ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯ್ ಕುಮಾರ್ ಅಭಿನಂದಿಸುವರು ಎಂದು ಕಾರ್ಯಕ್ರಮ ಆಯೋಜಕ, ವೇದಿಕೆ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ತಿಳಿಸಿದ್ದಾರೆ.

Related posts

ಪಾಸಿಟಿವ್ ತಮ್ಮಯ್ಯ @ 75‌

ಬೆಳ್ಳಿ ಗೆದ್ದ ಮೊದಲ ಭಾರತೀಯ ಕನ್ನಡಿಗ ಆಯುಶ್‌

ನೇರಲಕೆರೆಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ-2026  

Leave a Comment