NEWS

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ

ಪಾಲನೆ ನ್ಯೂಸ್

ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಭೀತಿಯಿಂದ ಹೆಚ್ಚು ಖರೀದಿಸಬೇಡಿ. ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಬುಧವಾರ ತಿಳಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡುವ ನಂಬಬೇಡಿ ಅಥವಾ ಭಯಭೀತರಾಗಿ ಹೆಚ್ಚು ಖರೀದಿಸಲು ಮುಂದಾಗ ಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ದೇಶದ ಅತಿದೊಡ್ಡತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ.

ಔಟ್‌ಲೆಟ್‌ಗಳಲ್ಲಿ ಉತ್ತಮ ಸಂಗ್ರಹ ಇದೆ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ. ಭೀತಿ ವದಂತಿಗಳು ಅನಗತ್ಯ ಉಂಟುಮಾಡಬಹುದು ಮತ್ತು ಸಾಮಾನ್ಯ ಪೂರೈಕೆಗೆ ಅಡ್ಡಿಪಡಿಸಬಹುದು ಎಂದು ಎಚ್ಚರಿಸಿದ ಐಒಸಿ, ನಾಗರಿಕರು ಭೀತಿಯಿಂದ ಹೆಚ್ಚು ಖರೀದಿಯನ್ನು ತಪ್ಪಿಸಬೇಕು ಮತ್ತು ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು ಎಂದು ಒತ್ತಾಯಿಸಿದೆ. ಇನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಕೂಡ ಕೆಲವು ಪ್ರದೇಶಗಳಲ್ಲಿ ಇಂಧನ ಕೊರತೆಯ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದು ಸಂಪೂರ್ಣ ಆಧಾರರಹಿತ ಎಂದು ಹೇಳಿದೆ. ‘ದೇಶದಾದ್ಯಂತ ಯಾವುದೇ ಇಂಧನ ಕೊರತೆಯಿಲ್ಲ’ ಎಂದು ಪ್ರತಿಪಾದಿಸಿದೆ.

ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ನ ನಿವ್ವಳ ರಫ್ತುದಾರ ರಾಷ್ಟ್ರವಾಗಿದ್ದು, ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ನ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ. ಪೂರೈಕೆ ಚೈನ್ ಯಾವುದೇ ಅಡಚಣೆಯಿಲ್ಲದೆ ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಅಥವಾ ಎಲ್ ಪಿಜಿ ಕೊರತೆ ಇಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಕೂಡ ಹೇಳಿದ್ದು, ಸರಬರಾಜು ಸ್ಥಿರವಾಗಿದೆ ಮತ್ತು ಸಾಕಷ್ಟು ಸ್ಟಾಕ್ ಇದೆ ಸ್ಪಷ್ಟಪಡಿಸಿದೆ. ‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುಎಇನಲ್ಲಿ 3 ಭಾರತೀಯರಿಗೆ ಗಾಯ

ಭಾರತ -‌ ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

Leave a Comment