NEWS

ಹಂಪಿಯಲ್ಲಿ ತುಂಗಾರತಿ ; ಕಾಶಿಯ ಗಂಗಾರತಿ ರೀತಿ !

ಪಾಲನೆ ನ್ಯೂಸ್

ಹೊಸಪೇಟೆ: ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಕಾಶಿಯ ಗಂಗಾರತಿ ಮಾದರಿಯಲ್ಲಿ ತುಂಗಾರತಿ ಹಂಪಿಯಲ್ಲಿ ಕಾರ್ಯಕ್ರಮ ನೆರವೇರಿತು.

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರವಿರುವ ತುಂಗಭದ್ರಾ ನದಿಯ ಸ್ನಾನ ಘಟ್ಟದ ಬಳಿ ಬುಧವಾರ ಸಂಜೆ ಕಾರ್ಯಕ್ರಮ ನಡೆಯಿತು. ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ನದಿಗೆ ಆರತಿ ಬೆಳಗಿದರು. ಸಚಿವ ಜಮೀ‌ಅಹಮದ್, ಜಿಲ್ಲಾಧಿಕಾರಿ, ಮಾಜಿ ಶಾಸಕರು, ಅಧಿಕಾರಿಗಳು ಪಾಲ್ಗೊಂಡಿದ್ದರು. ನದಿಯ ನೀರಿನಲ್ಲಿ ಪ್ರತಿಫಲಿ ಸಿದ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದ ನೆರೆದಿದ್ದ ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸಿತು.

ಹಂಪಿಯ ಪವಿತ್ರ ತುಂಗಭದ್ರಾ ನದಿಗೆ ಗೌರವ ಸಲ್ಲಿಸಲು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಹವಾಮಾನ ಒಪ್ಪಂದ ಸೇರಿ 66 ಅಂತರರಾಷ್ಟ್ರೀಯ ಒಡಂಬಡಿಕೆಗಳಿಂದ ಹೊರನಡೆದ ಅಮೆರಿಕ

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸೂಚನೆ

ಗ್ರಾಮ ಪಂಚಾಯತ್ ನೌಕರರ ಅನುಮೋದನೆಯ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

Leave a Comment