NEWS

ದುಬೈಗೆ ತೆರಳುವ ಸಾಧ್ಯತೆಯಲ್ಲಿ ಎಸ್‌ಐಟಿ ತಂಡ

ಪಾಲನೆ ನ್ಯೂಸ್

ಬೆಂಗಳೂರು: ಕಾನ್ಸಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ರಾಯ್ ಆತ್ಮಹತ್ಯೆ ಪ್ರಕರಣ ತನಿಖೆ ಚುರುಕು ಸಂಬಂಧಿಸಿ ಚುರುಕುಗೊಳಿಸಿರುವ ఎనోఐటి, ದುಬೈನಲ್ಲಿ ಅವರು ಹೂಡಿಕೆ ಮಾಡಿದ್ದ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಅಲ್ಲಿಗೆ ತೆರಳುವ ಸಾಧ್ಯತೆ ಇದೆ.

ರಿಯಲ್ ಎಸ್ಟೇಟ್ ದಂಧೆಯಲ್ಲಿ ಹಣಕಾಸಿನ ವ್ಯವಹಾರ ಹಾಗೂ ಹೂಡಿಕೆಯಲ್ಲಿ ನಷ್ಟ ಹೊಂದಿದ್ದರ ಪರಿಣಾಮ ಮಾನಸಿಕ ಖಿನ್ನತೆಗೆ ರಾಯ್ ಒಳಗಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ನಡೆಸಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರಾಯ್ ನೂರಾರು ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ, ಭಾರತದ ಕರೆನ್ಸಿ ವಿದೇಶದಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಕೇರಳದ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದೆ. ಇದರ ಜಾಡು ಹಿಡಿದು ಎಸ್ ಐಟಿ ತಂಡ ದುಬೈ ಸೇರಿ ಕೇರಳ, ದೆಹಲಿ, ಮುಂಬೈನಲ್ಲಿ ರಾಯ್ ಹೊಂದಿದ್ದ ಆಸ್ತಿಗಳ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

Karnataka Politics | ಅಧಿವೇಶನ ಬಳಿಕ ಸಂದೇಶ: ಡಿಕೆಶಿ ಬಣ ವಿಶ್ವಾಸ

ಭೂ ವ್ಯಾಜ್ಯ ಪ್ರಕರಣದಲ್ಲಿ ಮೈಸೂರು ಡಿಸಿ ವಿರುದ್ಧ ಅರೆಸ್ಟ್ ವಾರೆಂಟ್

ಮಾರ್ಚ್ 8ರಂದು 600 ಕಲಿಕಾರ್ಥಿಗಳಿಗೆ ಸಾಕ್ಷರತಾ ಪರೀಕ್ಷೆ

Leave a Comment