NEWS

25ರಂದು ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಪಾಲನೆ ನ್ಯೂಸ್

ಮಂಡ್ಯ: ತಾಲೂಕಿನ ಸಾತನೂರು ಬೆಟ್ಟದಲ್ಲಿ ಶ್ರೀಕಂಬದನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಜ.25 ರಂದು ನಡೆಯಲಿದೆ.

ಜ .21ರಂದು ಶ್ರೀಕಂಬದ ನರಸಿಂಹ ಸ್ವಾಮಿಗೆ ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 5 ರಿಂದ 8 ಗಂಟೆಯವರೆಗೆ ಸ್ವಸ್ತಿ ವಾಚನ ವಿಶ್ವೇಶ್ವೇನಾರಾಧನೆ ಭಗವತ್ ವಾಸುದೇವ ಪುಣ್ಯಾಹರಕ್ಷಾ ಬಂಧನ, ಮೃತಿಕಾ ಸಂಗ್ರಹಣಾ ಅಂಕುರಾರ್ಪಣ, ಗರುಡ ಪ್ರತಿಷ್ಠೆ, ಅಂಕುರಾರ್ಪಣ ಹೋಮ, ಮಹಾಮಂಗಳಾರತಿ ನಡೆಯಿತು.

ಜ. 22ರಂದು ನಿತ್ಯ ಪಂಚಾಮೃತ ಅಭಿಷೇಕ, ವಿಶ್ವೇಶ್ವೇನಾರಾಧನೆ, ಭಗ ವತ್ ವಾಸುದೇವ ಪುಣ್ಯಾಹ ಧ್ವಜಾ ರೋಹಣ ಶೇಷವಾಹನೋತ್ಸವ, ಸಂಜೆ 5 ರಿಂದ 8 ಗಂಟೆಯವರೆಗೆ ಭೇರಿ ತಾಡನ, ಯಾಗಶಾಲಾ ಪ್ರವೇಶ, ದೇವತಾಹ್ವಾನ, ‘ವ್ವಾರತೋರಣ, ಧ್ವಜ ಕುಂಬಾರಧನೆ, ಕಲಶಾರಾಧನೆ, ನಿತ್ಯ ಹೋಮ, ನಿತ್ಯ ಬಲಿಹರಣ, ಏರ್ಪಡಿಸಲಾಗಿದೆ.

ಜ. 23ರಂದು ಗರುಡೋತ್ಸವ. ಸಂಜೆ 5 ರಿಂದ 8 ಗಂಟೆವರೆಗೆ ನಿತ್ಯ ಹೋಮ, ನಿತ್ಯ ಬಲಿಹರಣ ಪ್ರಹ್ಲಾದ ಪರಿಹಾಲನೆ, ಪ್ರಾಕಾರೋತ್ಸವ, ಮಹಾಮಂಗಳಾರತಿ ಜರುಗಲಿದೆ. ಜ. 24ರಂದು ಬೆಳಗ್ಗೆ8 ರಿಂದ 12 ಗಂಟೆಯವರೆಗೆ ಶ್ರೀ ಸ್ವಾಮಿಯವರಿಗೆ ಕಲ್ಯಾಣೋತ್ಸವ, ಸಂಜೆ 5 ರಿಂದ 8 ಗಂಟೆ ವರೆಗೆ ನಿತ್ಯಹೋಮ, ನಿತ್ಯ ಬಲಿಹರಣ, ಗಜೇಂದ್ರ ಮೋಕ್ಷ, ಗಜ ವಾಹನೋತ್ಸವ ಆಯೋಜಿಸಲಾಗಿದೆ.

ಜ. 25ರಂದು ರಥ ಪ್ರತಿಷ್ಠೆ, ರಥಾಂಗ ಹೋಮ, ರಥಬಲಿ, ರಾಜ ಮರ್ಯಾದೆಯಲ್ಲಿ ಬೆಳಗ್ಗೆ 11.50 ರಿಂದ 12.15 ರವರೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಸ್ವಾಮಿ ‘ಬ್ರಹ್ಮರಥೋತ್ಸವ’ ಜರುಗಲಿದೆ. ಸಂಜೆ 5 ರಿಂದ 8 ಗಂಟೆಯವರೆಗೆ ನಿತ್ಯ ಹೋಮ, ನಿತ್ಯ ಬಲಿಹರಣ ಶಾಂತೋತ್ಸವ ಜರುಗಲಿದೆ. ಜ. 26ರಂದು ಅಶ್ವ ವಾಹನೋತ್ಸವ, ಸಂಧಾನ ಸೇವಾ ಅವಕೃತ ಸ್ನಾನ, ನಿತ್ಯ ಹೋಮ, ನಿತ್ಯ ಬಲಿಹರಣ, ಪ್ರಾಕಾರೋತ್ಸವ ನಡೆಯಲಿದೆ.

ಜ. 27ರಂದು ಹನುಮಂತೋತ್ಸವ ಮಹಾಪೂರ್ಣಾಹುತಿ, ಧ್ವಜಾರೋಹಣ ಕುಂಭಉದ್ಘಾಸನ, ಕುಂಭಪೋಕ್ಷಣ ಮಹಾಮಂಗಳಾರತಿ, ಸಂಜೆ 5 ರಿಂದ 8 ಗಂಟೆಯವರೆಗೆ ಶ್ರೀಸ್ವಾಮಿಗೆ ಮಹಾ ಕುಂಭಾಭಿಷೇಕ, ದ್ವಾದಶಾರಾಧನೆ, ಮೂಕಬಲಿ, ಶಯನೋತ್ಸವ ಮಹಾಮಂಗಳಾರತಿ ನಡೆಯಲಿದೆ.ಕಾರ್ಯಕ್ರ ಮಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಮಂಡ್ಯ ಉಪವಿಭಾಗಾಧಿ ಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಎಸ್.ವಿಶ್ವನಾಥ್ ಭಾಗವಹಿಸಲಿದ್ದಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ವಸತಿ ನಿಲಯಗಳಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮಗೊಳಿಸಲು ಸೂಚಿಸಿದ ಜಿ.ಪಂ. ಸಿಇಓ,

ಮಹಿಳಾ ದಿನದಂದು ಜವಾಬ್ದಾರಿಯನ್ನೂ ನೆನಪಿಸಿಕೊಳ್ಳಬೇಕು : ಪ್ರೊ. ಎಂ. ಶ್ರೀಲತಾ

ಸಾರ್ವಜನಿಕ ಸೋಮವಾರದಂದು ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳಿಗೂ ಕಡ್ಡಾಯವಾಗಿ ಕ್ರಮವಹಿಸಿ: ಜಿ.ಪಂ. ಸಿಇಒ

Leave a Comment