NEWS

ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್ ಡಬ್ಲ್ಯೂಎಐ) ರಾಜ್ಯ ಸರ್ಕಾರಕ್ಕೆ ಮನವಿ

ಪಾಲನೆ ನ್ಯೂಸ್

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯಿಂದಾಗಿ ಜಾಗತಿಕವಾಗಿ ಇಂಧನ ಮತ್ತು ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದ್ದು, ಮದ್ಯದ ಬೆಲೆ ಪರಿಷ್ಕರಣೆಗೆ ಅವಕಾಶ ನೀಡುವಂತೆ ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್ ಡಬ್ಲ್ಯೂಎಐ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಐಎಸ್‌ಡಬ್ಲ್ಯುಎಐ ಆಹವಾಲು

ಭಾರತದ ಪ್ರೀಮಿಯಂ ಮದ್ಯದ ಉದ್ಯಮದ ಪ್ರಬಲ ಧ್ವನಿಯಾಗಿರುವ ಐಎಸ್‌ಡಬ್ಲ್ಯುಎಐ, ಪ್ರಸ್ತುತ ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಉದ್ಯಮವನ್ನು ರಕ್ಷಿಸಬೇಕೆಂದು ಕೋರಿದೆ. ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಪೆಟ್ರೋಕೆಮಿಕಲ್ ಬೆಲೆಗಳಲ್ಲಿನ ತೀವ್ರ ಏರಿಳಿತದಿಂದಾಗಿ ಬಾಟಲಿ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ವಿಪರೀತವಾಗಿ ಹೆಚ್ಚಿವೆ. ಉತ್ಪಾದನಾ ವೆಚ್ಚವು ಮಿತಿ ಮೀರಿರುವುದರಿಂದ, ಕೇವಲ ಕಾರ್ಯಾಚರಣೆಯ ದಕ್ಷತೆಯಿಂದ ಇದನ್ನು ಸರಿದೂಗಿಸಲು ತಯಾರಕರಿಗೆ ಅಸಾಧ್ಯವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಬೆಲೆ ಪರಿಷ್ಕರಣೆಗೆ ಅನುಮತಿ ನೀಡಬೇಕೆಂದು ಸಂಸ್ಥೆ ಆಗ್ರಹಿಸಿದೆ.

ಈ ಕುರಿತು ಮಾತನಾಡಿರುವ ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಷನ್‌ ಆಫ್ ಇಂಡಿಯಾ (ಐಎಸ್‌ಡಬ್ಲ್ಯುಎಐ) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಿತ್ ಪಾಧಿ, ಪಶ್ಚಿಮ ಏಷ್ಯಾದಲ್ಲಿನ ನಿರಂತರ ಬಿಕ್ಕಟ್ಟು ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ಉತ್ಪಾದನೆ, ಪ್ಯಾಕೇಜಿಂಗ್, ಸಾಗಾಣಿಕೆ ಮತ್ತು ಇಂಧನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಗಾಜಿನ ಬಾಟಲಿ, ಮುಚ್ಚಳ, ಲೇಬಲ್ ಮತ್ತು ಕಾರ್ಟನ್‌ಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಸ್ತುತ ಇರುವ ದರ ಪಟ್ಟಿಯಲ್ಲಿ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಅಬಕಾರಿ ಆದಾಯವನ್ನು ಮುಂದುವರಿಸಲು ಸರ್ಕಾರವು ಬೆಲೆ ಏರಿಕೆಯ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಟಿ-20 ವಿಶ್ವಕಪ್ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು

ಜನರ ಪರಿಹಾರದ ಹಣ ಲಪಟಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ

ಕೋಚ್ ನವಲ್ ಕಿರುಕುಳ, ನಿಂದನೆ ಎಂದು ನೀರಜ್ ಚೋಪ್ರಾ, ಸುಮಿತ್ ಅಂತಿಲ್‌ ದೂರು

Leave a Comment