NEWS

ಸಿಲಿಂಡರ್‌ಗಳ ದರ ಏರಿಕೆ

ಪಾಲನೆ ನ್ಯೂಸ್

ಹೈರಿಗೆ : ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ದರವನ್ನು ಮೇ 1ರಿಂದ ಒಂದೇ ಬಾರಿಗೆ 991ರೂ.ಗಳಿಗೆ ಏರಿಕೆ ಮಾಡಿದ್ದು, ಇದರಿಂದಾಗಿ ಹೋಟೆಲ್‌ಗಳಲ್ಲಿ ಊಟ ಹಾಗೂ ತಿಂಡಿ, ಕಾಫಿ, ಟೀ ದರ ಏರಿಕೆಯಾಗಿ ಜನ ಸಾಮಾನ್ಯರ ಮೇಲೆ ಹೊರೆ ಬೀಳುತ್ತದೆ ಹಾಗೂ ಮದುವೆ ಮೊದಲಾದ ಸಮಾರಂಭಗಳಿಗೂ ವಾಣಿಜ್ಯ ಸಮಾರಂಭಗಳನ್ನು ಆಯೋಜಿಸುವವರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈ ವರೆಗೂ ನೂರಿನ್ನೂರು ರೂ. ಹೆಚ್ಚಳ ಮಾಡುತ್ತಿದ್ದುದು ಸಹಜ ಆದರೆ ಏಕಾಏಕಿ 991ರೂ. ಹೆಚ್ಚಳ ಮಾಡಿರುವುದರಿಂದ ಹೋಟೆಲ್ ಉದ್ಯಮದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಸಿಲಿಂಡರ್‌ ಅಭಾವದಿಂದ ತೀವ್ರ ಕಂಗಾಲಾಗಿ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ಹೋಟೆಲ್ ಮಾಲೀಕರು ಸಿಲಿಂಡ‌ರ್ ದರ ಏರಿಕೆ ಹೊರೆಯಿಂದಾಗಿ ಹೋಟೆಲ್‌ಗಳನ್ನು ಶಾಶ್ವತವಾಗಿ ಮುಚ್ಚುವುದು ಅನಿವಾರ್ಯವಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ದರ ಏರಿಕೆಯನ್ನು ಹಿಂಪಡೆಯುವ ಮೂಲಕ ಹೋಟೆಲ್ ಉದ್ಯಮದವರ ಹಿತ ಕಾಪಾಡುವುದು ಅಗತ್ಯ.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಜನಗಣತಿ

ಎಐಟಿಎ 14 ವರ್ಷದೊಳಗಿನವರ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತರಾಗಿರುವ ಪದ್ಮಪ್ರಿಯಾ

ಮಾರ್ಚ್ 11 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ -2026

Leave a Comment