NEWS

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಉಲ್ಬಣಗೊಂಡಿದೆ

ಪಾಲನೆ ನ್ಯೂಸ್

ಟೆಹರಾನ್: ಅಮೆರಿಕ ಸೇನೆ ಇರಾನ್ ಧ್ವಜದ ಸರಕು ಹಡಗೊಂದನ್ನು ವಶಪಡಿಸಿಕೊಂಡಿದ್ದು, ಇದರ ಬೆನ್ನಲ್ಲೇ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಉಲ್ಬಣಗೊಂಡಿದೆ. ಈ ಘಟನೆ ಪ್ರಗತಿಯಲ್ಲಿರುವ ಶಾಂತಿ ಒಪ್ಪಂದ ವನ್ನು ಸಂಪೂರ್ಣ ಕುಸಿತಗೊಳ್ಳುವ ಸಾಧ್ಯತೆಗಳಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ವರದಿಗಳ ಪ್ರಕಾರ, ‘ಟೌಸ್ಕಾ’ ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎಂದು ಅಮೆರಿಕ ಆರೋಪಿಸಿದೆ.


ಇದರ ನಂತರ ಅಮೆರಿಕ ನೌಕಾಪಡೆಯ ಡಿಸ್ಟ್ರಾಯರ್ ಹಡಗು ಅದರ ಎಂಜಿನ್ ಭಾಗಕ್ಕೆ ಗುಂಡು ಹಾರಿಸಿ ಹಡಗನ್ನು ನಿಷ್ಕ್ರಿಯಗೊಳಿಸಿದೆ. ನಂತರ ಅಮೆರಿಕ ನೌಕಾ ಪಡೆ ಹಡಗನ್ನು ವಶಕ್ಕೆ ಪಡೆದು ಅದರೊಳಗಿನ ಸರಕುಗಳನ್ನು ಪರಿಶೀಲನೆ ನಡೆಸಿದೆ. ಈ ಸಂಪೂರ್ಣ ಕಾರ್ಯಾಚರಣೆಯ ವಿಡಿಯೋ ವನ್ನು ಅಮೆರಿಕ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ್ದು, ಹಲವು ಗಂಟೆಗಳ ಎಚ್ಚರಿಕೆಗಳ ನಂತರ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿ ಸಿದೆ. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ಕಾರ, ಈ ಕ್ರಮವನ್ನು ನೇರವಾಗಿ ‘ಸಮುದ್ರ ದರೋಡೆ’ ಎಂದು ಕರೆದಿದೆ.
ಇರಾನ್ ಸೇನೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, ‘ಅಮೆರಿಕದ ಈ ದಾಳಿಗೆ ನಾವು ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಘೋಷಿಸಿದೆ. ಈ ಹೇಳಿಕೆಗಳಿಂದಾಗಿ ಸೇನಾ ಸಂಘರ್ಷದ ಭೀತಿ ಮತ್ತಷ್ಟು ಹೆಚ್ಚಿದೆ. ಟ್ರೆಹ್ರಾನ್ ರಾಜಕೀಯ ವಲಯವೂ ಕಠಿಣ ನಿಲುವು ತೆಗೆದುಕೊಂಡಿದ್ದು, ಅಧ್ಯಕ್ಷ ಮಸೂದ್ ಪೆಜೆಷ್ಠಿಯನ್ ಅಮೆರಿಕದ ಕ್ರಮವನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಟೀಕಿಸಿದ್ದಾರೆ.


ವಿದೇಶಾಂಗ ಸಚಿವ ಅಬ್ಬಾಸ್ ಅರಷ್ಟೇ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಮೆರಿಕದ ಈ ನಡೆ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಧಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ. ಈ ಘಟನೆ ನಡೆಯುತ್ತಿರುವುದು ಅತ್ಯಂತ ಸೂಕ್ಷ್ಮ ಸಮಯದಲ್ಲಿ, ಏಕೆಂದರೆ ಕೆಲವೇ ದಿನಗಳಲ್ಲಿಇರಾನ್-ಅಮೆರಿಕ ಶಾಂತಿ ಒಪ್ಪಂದದ ಅವಧಿ ಮುಗಿಯಲಿದ್ದು, ಹೊಸ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮಾಹಿತಿಗಳು ಲಭ್ಯವಾಗಿಲ್ಲ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಮಾತುಕತೆ ಕೂಡ ಅನಿಶ್ಚಿತವಾಗಿದೆ. ಇದರಿಂದ ಅಮೆರಿಕ-ಇರಾನ್ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಸಿಗುವ ಸಾಧ್ಯತೆಗಳು ಕುಗ್ಗುವಂತಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಾರಾಯಣ ನೇತ್ರಾಲಯದಿಂದ ದೃಷ್ಟಿ ವಿಶೇಷ ಚೇತನರಿಗೆ ಹೊಸ ಸಾಧನ: ಎಐ ಕನ್ನಡಕ: ‘ಸ್ಮಾರ್ಟ್ ವಿಷನ್ ಗ್ಲಾಸಸ್ ಅಲ್ಟ್ರಾ ‘ ಲೋಕಾರ್ಪಣೆ – ರಾಘವೇಂದ್ರ ಅಡಿಗ ಎಚ್ಚೆನ್

ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ

ಮೋದಿ ಅದ್ಭುತ ನಾಯಕ: ಭಾರತದೊಂದಿಗೆ ‘ವ್ಯಾಪಾರ ಒಪ್ಪಂದ’ಕ್ಕೆ ಟ್ರಂಪ್ ವಿಶ್ವಾಸ

Leave a Comment