NEWS

ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು

ಪಾಲನೆ ನ್ಯೂಸ್

ಬೆಂಗಳೂರು: ಬೇಸಿಗೆ ರಜೆ ಅಂಗವಾಗಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಭಾರತೀಯ ರೈಲ್ವೆ ಆಯ್ದ ಕೆಲ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. 19ರ ಸಂಜೆ 4.25ಕ್ಕೆ ಅಲಿಪುರ್ ದ್ವಾರ್‌ನಿಂದ ಹೊರಡುವ ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು 20ರ ಬೆಳಗ್ಗೆ 9.45ಕ್ಕೆ ಹುಬ್ಬಳ್ಳಿ ತಲುಪಲಿದೆ. ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.


ಎಸ್‌ಎಂವಿಟಿ ಬೆಂಗಳೂರಿನಿಂದ ರೂಪ್ಪಾ ವಿಶೇಷ ಎಕ್ಸ್‌ಪ್ರೆಸ್ ರೈಲು 22, 29ರ ಸಂಜೆ 4.35ಕ್ಕೆ ಹೊರಟು, ಮರುದಿನ ರಾತ್ರಿ 8.30ಕ್ಕೆ ರೂಪ್ಪಾ ತಲುಪಲಿದೆ. ರೂಪಾ ಬೆಂಗಳೂರು ದಂಡು ವಿಶೇಷ ಎಕ್ಸ್‌ಪ್ರೆಸ್ 16, 23, 30ರ ರಾತ್ರಿ 11.30ಕ್ಕೆ ರೂಪ್ಪಾ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 5.30ಕ್ಕೆ ಬೆಂಗಳೂರು ದಂಡು ನಿಲ್ದಾಣ ತಲುಪಲಿದೆ. ಕೃಷ್ಣರಾಜಪುರ, ಬಂಗಾರಪೇಟೆ, ಜೋಲಾರ್‌ಪೇಟೆಯಲ್ಲಿ ನಿಲುಗಡೆ ಇರಲಿದೆ.
ಯಶವಂತಪುರ ನ್ಯೂಜಿಗುರಿ ವಿಶೇಷ ಎಕ್ಸ್‌ಪ್ರೆಸ್‌ ರೈಲು 17 ಮತ್ತು 24ರ ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ದಿನ ಬೆಳಗ್ಗೆ 7ಕ್ಕೆ ಪಶ್ಚಿಮ ಬಂಗಾಳದ ನ್ಯೂ ಜಗುರಿ ತಲುಪಲಿದೆ. 20 ಮತ್ತು 27ರ ಬೆಳಗ್ಗೆ 8.30ಕ್ಕೆ ನ್ಯೂ ಜನ್ಮಗುರಿಯಿಂದ ಹೊರಟು, ಮರುದಿನ ಬೆಳಗ್ಗೆ 9.55ಕ್ಕೆ ಬೆಂಗಳೂರು ದಂಡು ನಿಲ್ದಾಣಕ್ಕೆ ಆಗಮಿಸಲಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

ಶೇ.56ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಮನವಿ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದ ಸಿದ್ದರಾಮಯ್ಯ

ಪದ್ಮಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರಿಗೆ ಜಿಲ್ಲಾಧಿಕಾರಿ ಸನ್ಮಾನ

Leave a Comment