NEWS

ಎಲ್ಲ ರಾಜ್ಯಕ್ಕೂ ಶೇ.50 ಸ್ಥಾನ ಹೆಚ್ಚಳ ನಿಶ್ಚಿತ | ಕರ್ನಾಟಕಕ್ಕೆ 42 ಲೋಕಸಭಾ ಕ್ಷೇತ್ರ!

ಪಾಲನೆ ನ್ಯೂಸ್


ನವದೆಹಲಿ: ಮಹಿಳಾ ಮೀಸಲಾತಿ ವಿಧೇಯಕದ ಜತೆಯಲ್ಲೇ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ತಿದ್ದುಪಡಿಗೂ ಗುರುವಾರದಿಂದ ಆರಂಭವಾಗಲಿರುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನ ಸಾಕ್ಷಿಯಾಗಲಿದೆ. ಪರಿಷ್ಕೃತ ಮಸೂದೆ ಪ್ರಕಾರ ಲೋಕಸಭೆಯ ಒಟ್ಟು ಸ್ಥಾನ ಈಗಿರುವ 543ರಿಂದ 850ಕ್ಕೆ ಏರಿಕೆ ಆಗುವುದು ಬಹುತೇಕ ಖಚಿತವಾಗಿದೆ. ಈ ಪೈಕಿ 815 ಕ್ಷೇತ್ರಗಳನ್ನು ರಾಜ್ಯಗಳಿಗೆ ಉಳಿದ 35 ಸೀಟುಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಆಗುವ ಸಾಧ್ಯತೆಗಳಿವೆ.

ಕ್ಷೇತ್ರ ಪುನರ್ವಿಂಗಡಣೆಯಿಂದ ಜನಸಂಖ್ಯೆ ಕಡಿಮೆ ಇರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಹುದೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೇ.50 ಯುನಿಫಾರ್ಮ್ ಫಾರ್ಮುಲಾ ಹಣದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದು ನಿಜವಾಗಿದ್ದಲ್ಲಿ ಎಲ್ಲ ರಾಜ್ಯಗಳ ಲೋಕಸಭೆ ಕ್ಷೇತ್ರ ಶೇ.50 ಹೆಚ್ಚಾಗಲಿದೆ. ಅಂದರೆ ಕರ್ನಾಟಕದ ಒಟ್ಟು ಸಂಸತ್ ಕ್ಷೇತ್ರಗಳ ಸಂಖ್ಯೆ ಈಗಿರುವ 28ರಿಂದ 42ಕ್ಕೆ ಏರಿಕೆ ಆಗಲಿದೆ.

ಪ್ರಮುಖಾಂಶಗಳು
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ತಿದ್ದುಪಡಿ
ಒಟ್ಟಾರೆ ಲೋಕಸಭೆ ಕ್ಷೇತ್ರ 850ಕ್ಕೆ ಹೆಚ್ಚಳ
ರಾಜ್ಯಗಳಿಗೆ 815 ಸಂಸತ್ ಕ್ಷೇತ್ರ ಹಂಚಿಕೆ
35 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಕ್ಕೆ?
ಶೇ.50 ಯುನಿಫಾರ್ಮ್ ಫಾರ್ಮುಲಾ ಸಿದ್ದ?
ನಿಜವಾದರೆ ಕರ್ನಾಟಕದ ಸ್ಥಾನ 42ಕ್ಕೆ ಏರಿಕೆ

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn


Related posts

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರಿಗೆ ರೂ.2123 ಕೋಟಿ ಅನುದಾನ ಬಿಡುಗಡೆ : ಚಿಕ್ಕಲಿಂಗಯ್ಯ

ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಹಾಗೂ ಕಾಮಗಾರಿಗಳಿಗೆ ಆದ್ಯತೆ ನೀಡಿ : ಡಾ ಕುಮಾರ್

ಟ್ರಂಪ್‌ ಹೊಸ ಧಮಕಿ

Leave a Comment