NEWS

ತಾಲಿಬಾನ್ ಉಗ್ರರ ಹತ್ಯೆ

ಪಾಲನೆ ನ್ಯೂಸ್

ಇಸ್ಲಾಮಾಬಾದ್‌: ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 800 ಅಫ್ಘಾನ್ ತಾಲಿಬಾನ್ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕಿಸ್ತಾನ ಭಾನುವಾರ ತಿಳಿಸಿದೆ. ಈ ಪಾಕಿಸ್ತಾನದ ಸೇನಾ ಕಾರ್ಯಾಚರಣೆ ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದ ಈವರೆಗೆ ಕನಿಷ್ಠ 796 ಫಿಟ್ನಾ ಅಲ್ ಖವಾರಿಜ್ (ಎಫ್‌ಎಕೆ) ಮತ್ತು ಅಫ್ಘಾನ್ ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದೆ. 1,043ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ. 286 ಅಫ್ಘಾನ್ ತಾಲಿಬಾನ್ ನೆಲೆಗಳನ್ನು ನಾಶಪಡಿಸಲಾಗಿದ್ದು, 44 ನೆಲೆಗಳನ್ನು ಸೇನೆ ವಶಕ್ಕೆ ಪಡೆದಿದೆ.

ಉಗ್ರರಿಗೆ ಸೇರಿದ 249 ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು, ಫಿರಂಗಿಗಳು ಮತ್ತು ಡೋನ್ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತಾವುಲ್ಲಾ ತರಾ‌ರ್ ತಿಳಿಸಿದ್ದಾರೆ. ಗಡಿಯಾಚೆಯಿಂದ ಅಫ್ಘಾನ್ ತಾಲಿಬಾನಿಗಳು ಯಾವುದೇ ಪ್ರಚೋದನೆ ಇಲ್ಲದೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ಫೆ. 26ರ ರಾತ್ರಿ ‘ಆಪರೇಷನ್ ಗಜಬ್ ಲಿಲ್-ಹಕ್’ ಆರಂಭಿಸಿತ್ತು. ಅಫ್ಘಾನಿಸ್ತಾನದಾದ್ಯಂತ ಇರುವ 81 ಭಯೋತ್ಪಾದಕರು ಮತ್ತು ಉಗ್ರರಿಗೆ ಬೆಂಬಲ ನೀಡುವ ಮೂಲಸೌಕರ್ಯ ನೆಲೆಗಳ ಮೇಲೆ ಪಾಕ್ ಸೇನೆ ವೈಮಾನಿಕ ದಾಳಿ ನಡೆಸಿದೆ. ಗುರುವಾರ ಮತ್ತು ಶುಕ್ರವಾರ ಅಫ್ಘಾನ್ ತಾಲಿಬಾನ್‌ ನಡೆಸಿದ ದಾಳಿ ಯತ್ನವನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿವೆ. ಈ ಘರ್ಷಣೆಯಲ್ಲಿ 37 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

17 ವರ್ಷದ ಬಾಲಕಿ ಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

ಹೈದರಾಬಾದಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಮ್ಮೇಳನ

Leave a Comment